Bettadapura, (Mysore) Mysuru District : ಬೆಟ್ಟದಪುರ ಪಟ್ಟಣದಲ್ಲಿ ಭಾನುವಾರ ವಾರಾಂತ್ಯ ಕರ್ಪ್ಯೂ (Weekend Curfew) ಇದ್ದ ಹಿನ್ನೆಲೆ ಸಂತೆಗೆ ನಿರ್ಬಂಧ ವಿಧಿಸಿದ್ದರೂ ರೈತರು ಹಾಗೂ ವ್ಯಾಪಾರಿಗಳು ಕೋವಿಡ್ (Covid-19) ಮಾರ್ಗಸೂಚಿ ಮರೆತು ಮೇಕೆ, ಕುರಿಗಳ ವ್ಯಾಪಾರದಲ್ಲಿ ತೊಡಗಿದ್ದು ಕರ್ಫ್ಯೂಗೆ ಮಿಶ್ರ ಪ್ರತಿಕ್ರಿಯೆ ದೊರೆತಿದೆ.
ಪ್ರತಿ ಭಾನುವಾರ ಬೆಟ್ಟದಪುರ ಹೋಬಳಿ ಮಟ್ಟದಲ್ಲಿ ಸಂತೆ ನಡೆಯುತ್ತಿದ್ದು, ಸುತ್ತಮುತ್ತಲಿನ ಗ್ರಾಮದವರು ತಾವು ಬೆಳೆದಿರುವ ಬೆಳೆಗಳು ಹಾಗೂ ಆಡು, ಕುರಿಗಳನ್ನು ತಂದು ಮಾರುವುದು ಅನಾದಿಕಾಲದಿಂದಲೂ ನಡೆಕೊಂಡು ಬಂದಿದೆ.