Mysuru : ಜನವರಿ 1 ರಿಂದ ನಂದಿನಿ ಹಾಲು ಮಾರಾಟ ಮಾಡುವ ಬೂತ್‌ಗಳಿರುವಲ್ಲಿ (Nandini Milk Parlour Booth) ಹಾಲು ಉತ್ಪಾದಕರ ಸಹಕಾರ ಸಂಘಗಳು ಕಚ್ಚಾ ಹಾಲು ಮಾರಾಟ ಮಾಡುವುದನ್ನು ಮೈಮುಲ್ (MYMUL Mysuru Milk Union Limited – KMF) ನಿಷೇಧಿಸಿದೆ.
ಬಹಳಷ್ಟು ಸಂಘಗಳು ಕಚ್ಚಾ ಹಾಲನ್ನು ಸಂಗ್ರಹಿಸಿ ಸ್ಥಳೀಯವಾಗಿಯೇ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರಿಂದ ಸಹಕಾರ ಸಂಘಗಳು ಕೇವಲ ಹಾಲು ಸಂಗ್ರಹವನ್ನಷ್ಟೇ ಮಾಡಬೇಕು. ಯಾವುದೇ ಕಾರಣಕ್ಕೂ ಕಚ್ಚಾ ಹಾಲು ಮಾರಾಟ ಮಾಡಬಾರದು ಎಂದು ಸೂಚಿಸಲಾಗಿದೆ.