Pro Kabaddi 2021 – ಆವೃತ್ತಿ 8 ರ ಜನವರಿ 4, 2022 ಮಂಗಳವಾರದಂದು ನಡೆದ ಎರಡು ರೋಚಕ ಪಂದ್ಯಗಳು ಕಬಡ್ಡಿ ಪ್ರೇಕ್ಷಕರಿಗೆ ಭರಪೂರ ಮನೋರಂಜನೆ ನೀಡಿದವು. ಹರಿಯಾಣ ಸ್ಟೀಲರ್ಸ್ (Haryana Steelers) ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಯು ಮುಂಬಾ (U Mumba) ಅವರನ್ನು ಎದುರಾದರೆ, ಎರಡನೇ ಪಂದ್ಯದಲ್ಲಿ ಯುಪಿ ಯೋದ್ಧ (UP Yoddha) ಮತ್ತು ತಮಿಳ್ ತಲೈವಾಸ್ (Tamil Thalaivas) ಮುಖಾಮುಖಿಯಾದರು.
ಪಂದ್ಯ 1: U Mumba Vs Haryana Steelers
ದಿನದ ಮೊದಲ ಆಟವು ಹರಿಯಾಣ ಸ್ಟೀಲರ್ಸ್ (Haryana Steelers) ಮತ್ತು ಯು ಮುಂಬಾ (U Mumba) ನಡುವೆ ರೋಚಕ ಟೈನೊಂದಿಗೆ (24-24) ಪ್ರಾರಂಭವಾಯಿತು. ನಿಗದಿತ 40 ನಿಮಿಷಗಳಲ್ಲಿ ತಂಡಗಳು ತಲಾ 24 ಅಂಕಗಳನ್ನು ಗಳಿಸಿದವು.
ಹರಿಯಾಣ ಸ್ಟೀಲರ್ಸ್ (Haryana Steelers) ಪರ ರೋಹಿತ್ ಗುಲಿಯಾ (Rohit Gulia) 4 ಟಚ್ ಪಾಯಿಂಟ್‌ಗಳು, 3 ಬೋನಸ್ ಮತ್ತು ಟ್ಯಾಕಲ್ ಪಾಯಿಂಟ್ ಗಳಿಸಿದರೆ, ವಿಕಾಶ್ ಕಾಂಡೋಲಾ (Vikash Kandola) ಐದು ಪಾಯಿಂಟ್ ಗಳಿಸಿದರು. ಯು ಮುಂಬಾ ಪರ ಅಭಿಷೇಕ್ ಸಿಂಗ್ (Abhishek Singh) ಮತ್ತು ಫಜೆಲ್ ಅತ್ರಾಚಲಿ (Fazel Atrachali) ತಲಾ 4 ಅಂಕ ಗಳಿಸಿದರು.
ಪಂದ್ಯ 2: Tamil Thalaivas vs UP Yoddha
ದಿನದ ಎರಡನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ಆರು ಅಂಕಗಳಿಂದ (33-39) ಯುಪಿ ಯೋಧಾ (UP Yoddha) ತಂಡವನ್ನು ಸೋಲಿಸಿತು. ತಲೈವಾಸ್ (Tamil Thalaivas) ಪರ ಸಾಗರ್ (Sagar) ಹೈ 5 ಅನ್ನು ದಾಖಲಿಸಿದರು, ರೈಡರ್ ಮಂಜೀತ್ (Manjeet) ಆರು ರೇಡ್ ಪಾಯಿಂಟ್‌ಗಳನ್ನು ಹಾಗೂ ಕೆ ಪ್ರಪಂಜನ್ (K. Prapanjan) ಮತ್ತು ಭವಾನಿ ರಜಪೂತ್ (Bhavani Rajput) ತಲಾ ನಾಲ್ಕು ರೇಡ್ ಪಾಯಿಂಟ್‌ಗಳನ್ನು ಗಳಿಸಿದರು. ಯುಪಿ ಯೋಧಾ (UP Yoddha) ಪರ ಸುರೇಂದರ್ ಗಿಲ್ (Surender Gill) 14 ಅಂಕಗಳನ್ನು ಪಡೆದರು.
PKL 2021 – January 4, 2022 Score Card
PKL 2021 ರ January 4, 2022 ದಿನದ ಪಂದ್ಯಗಳ ನಂತರ ತಂಡಗಳ ಬಲಾಬಲಗಳು ಈ ರೀತಿ ಇವೆ
Image: Pro Kabaddi