Pro Kabaddi 2021 – ಆವೃತ್ತಿ 8 ರ ಜನವರಿ 10, 2022 ರಂದು ಎರಡು ಮುಖಾಮುಖಿಗಳೊಂದಿಗೆ ಮುಂದುವರೆಯಿತು. ದಿನದ ಮೊದಲ ಪಂದ್ಯದಲ್ಲಿ ತಮಿಳು ತಲೈವಾಸ್ (Tamil Thalaivas) ಮತ್ತು ಹರಿಯಾಣ ಸ್ಟೀಲರ್ಸ್ (Haryana Steelers) ಮುಖಾಮುಖಿಯಾದವು. ಎರಡನೇ ಪಂದ್ಯದಲ್ಲಿ Season 1 ರ ವಿಜೇತ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers) ಮತ್ತು ಏಳನೇ ಆವೃತ್ತಿಯ ರನ್ನರ್ ಅಪ್ ದಬಾಂಗ್ ದೆಹಲಿ K.C. (Dabang Delhi K.C.) ನಡುವೆ ಹಣಾಹಣಿ ನಡೆಯಿತು.
ಪಂದ್ಯ 1: Tamil Thalaivas Vs Haryana Steelers
ದಿನದ ಮೊದಲ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ (Haryana Steelers) ವಿರುದ್ಧ 45-26 ಅಂಕಗಳ ಜಯದೊಂದಿಗೆ ತಮಿಳ್ ತಲೈವಾಸ್ (Tamil Thalaivas) PKL ಸೀಸನ್ 8 ರಲ್ಲಿ ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರೆಸಿದರು.
ತಮಿಳ್ ತಲೈವಾಸ್ ಪರ ಮಂಜೀತ್ (Manjeet) Super 10 ಪಡೆದರು. ಸುರ್ಜೀತ್ ಸಿಂಗ್ (Surjeet Singh) ಮತ್ತು ಸಾಗರ್ (Sagar) ಹೈ 5 ಅನ್ನು ಗಳಿಸಿದರು.
ಹರಿಯಾಣ ಸ್ಟೀಲರ್ಸ್ ಪರ ವಿಕಾಶ್ ಕಾಂಡೋಲಾ (Vikash Kandola) 9 ಅಂಕಗಳನ್ನು ಗಳಿಸಿದರು.
ಪಂದ್ಯ 2: Jaipur Pink Panthers Vs Dabang Delhi K.C.
ದಿನದ ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers) 30-28 ಅಂಕಗಳ ಅಂತರದ ಜಯದೊಂದಿಗೆ PKL 8 ರಲ್ಲಿ ದಬಾಂಗ್ ಡೆಲ್ಲಿ K.C. (Dabang Delhi K.C.) ಯ ಅಜೇಯ ಓಟವನ್ನು ಕೊನೆಗೊಳಿಸಿತು.
ಜೈಪುರ ಪಿಂಕ್ ಪ್ಯಾಂಥರ್ಸ್ ಪರ ಸಾಹುಲ್ ಕುಮಾರ್ (Sahul Kumar) 8 ಟ್ಯಾಕಲ್ ಪಾಯಿಂಟ್ ಗಳಿಸಿದರು. ದೀಪಕ್ ಹೂಡಾ (Deepak Hooda) 9 ಅಂಕಗಳನ್ನು ಪಡೆದರು.
PKL 2021 – January 10, 2022 Score Card
PKL 2021 ರ January 10, 2022 ದಿನದ ಪಂದ್ಯಗಳ ನಂತರ ತಂಡಗಳ ಬಲಾಬಲಗಳು ಈ ರೀತಿ ಇವೆ